Monday, July 16, 2007

ನಿನ್ನದೇ ನೆನಪು

ನನ್ನ ಮನಸಲ್ಲಿ ದಿನವೂ ನಿನ್ನದೇ ನೆನಪು
ನನ್ನ ಕನಸಲ್ಲಿ ದಿನವೂ ನಿನ್ನದೇ ಛಾಪು
ಇದು ಪ್ರೇಮವೋ, ಆಂತರ್ಯವೋ
ಬರೀ ಮೋಹವೋ, ಹೊಸ ಬಂಧವೋ
ಆಹಾ ಇದೆಂಥ ಸುಂದರ ಕಲ್ಪನೆ,
ಆಹಾ ಇದೆಂಥ ಸುಂದರ ಕಲ್ಪನೆ.
ನನ್ನ ಮನಸಲ್ಲಿ ದಿನವೂ ನಿನ್ನದೇ ನೆನಪು
ನನ್ನ ಕನಸಲ್ಲಿ ದಿನವೂ ನಿನ್ನದೇ ಛಾಪು.

ನಡೆಯುತ ಹೋದರೆ ಹಿಂಬದಿ ಬರುವೆ ನೀನೆ ನೆರಳಾಗಿ,
ನುಡಿಯುತ ಇದ್ದರೆ ಅಲ್ಲೆ ಇರುವೆ ನೀನೆ ಸ್ವರವಾಗಿ,
ಕನಸೋ ಅಥವಾ ನನಸೋ
ಇದು ಪ್ರೀತಿ ಹುಟ್ಟೊ ವಯಸೋ,
ಚಿಗುರೋ ಪ್ರೀತಿಯಲಿ ಪ್ರೇಮಕಾವ್ಯವ ಚೆಲ್ಲಿ
ನನ್ನ ಕವಿಯ ಮಾಡಿ ಎಲ್ಲಿ ನೀನಿರುವೆ.
ನನ್ನ ಮನಸಲ್ಲಿ ದಿನವೂ ನಿನ್ನದೇ ನೆನಪು
ನನ್ನ ಕನಸಲ್ಲಿ ದಿನವೂ ನಿನ್ನದೇ ಛಾಪು.

ಬೀಸುವ ತಂಗಾಳಿ ನಿನ್ನ ಹೆಸರ ಕಂಪನು ಚೆಲ್ಲಿದಂತೆ
ಹರಿಯೋ ನದಿಯಲ್ಲಿ ನಿನ್ನ ರೂಪ ಬಳುಕಿ ನಡೆದಂತೆ
ಬ್ರಮೆಯೋ ಅಥವಾ ನಿಜವೋ,
ಇದು ಪ್ರೇಮ ಬರುವ ವಿಧವೋ
ಮನಸಿನ ಭಾವದಲಿ ಸೌಗಂಧ ರಾಗವ ಬೀರಿ
ನನ್ನ ಕೋಗಿಲೆ ಮಾಡಿ ಎಲ್ಲಿ ನೀನಿರುವೆ.

ನನ್ನ ಮನಸಲ್ಲಿ ದಿನವೂ ನಿನ್ನದೇ ನೆನಪು
ನನ್ನ ಕನಸಲ್ಲಿ ದಿನವೂ ನಿನ್ನದೇ ಛಾಪು
ಇದು ಪ್ರೇಮವೋ, ಆಂತರ್ಯವೋ
ಬರೀ ಮೋಹವೋ, ಹೊಸ ಬಂಧವೋ
ಆಹಾ ಇದೆಂಥ ಸುಂದರ ಕಲ್ಪನೆ,
ಆಹಾ ಇದೆಂಥ ಸುಂದರ ಕಲ್ಪನೆ.
ನನ್ನ ಮನಸಲ್ಲಿ ದಿನವೂ ನಿನ್ನದೇ ನೆನಪು
ನನ್ನ ಕನಸಲ್ಲಿ ದಿನವೂ ನಿನ್ನದೇ ಛಾಪು.


*----- ಜಯಸುತ -----*