ಕಣ್ಣೆದುರಲ್ಲೇ ಇದ್ದು
ನೀನು ಕಣ್ಣಿಗೆ ಕಾಣದಂತೆ,
ನನ್ನೇಕೆ ಹೀಗೆ ಸುಮ್ಮನೆ ಕಾಡಿರುವೆ.
ಮನಸೊಳಗೆ ಇದ್ದು
ನೀನು ಮನಸಿಗೆ ಬಾರದಂತೆ,
ನನ್ನೇಕೆ ಹೀಗೆ ಕಾಯಿಸಿ ಕೊಂದಿರುವೆ.
ಒಲವೇ ಒಲವೇ ನನ್ನೊಲವೆ ನೀ ಚೆಲುವೆ,
ಒಲವೇ ಒಲವೇ ನನ್ನುಸಿರಲಿ ನೀನಿರುವೆ.
ಮೌನಕೆ ಮೌನ ಮಾತಾಗಿ
ಹಾಡದ ಮಾತು ಜೊತೆಯಾಗಿ
ಮನಸೊಳಗೆ ಮರೆಯಾಗಿ.
ಹೇಳದಿಹ ಮಾತು ನೂರಾಗಿ
ಸಾವಿರ ಸುಳಿಗೆ ಬಿಗಿಯಾಗಿ
ಬಂಧನದಿ ಸೆರೆಯಾಗಿ.
ಉಸಿರಾಡುವ ಜೀವದ ಒಳಗೆ
ಹೊಳಪಾಗಿರೋ ಪ್ರೀತಿಯ ಒಡವೇ,
ಕನಸಾಗಿರೋ ನನ್ನ ಪ್ರೀತಿಯ ನೀ
ನನಸಾಗಿಸು ಓ ನನ್ನ ಚೆಲುವೆ
ನನಸಾಗಿಸು ಓ ನನ್ನ ಚೆಲುವೆ.
ಕಣ್ಣೆದುರಲ್ಲೇ ಇದ್ದು
ನೀನು ಕಣ್ಣಿಗೆ ಕಾಣದಂತೆ,
ನನ್ನೇಕೆ ಹೀಗೆ ಸುಮ್ಮನೆ ಕಾಡಿರುವೆ.
ನೀನೆಂಬ ಭಾವ ದೂರಾಗಿ
ನನಗೆಂಬ ಭಾವ ಚೂರಾಗಿ
ಕನಸುಗಳು ಹುಸಿಯಾಗಿವೆ.
ಸಾಗಿದ ಹೆಜ್ಜೆ ಗುರುತೊಳಗೆ
ಸವೆಯದ ಪ್ರೀತಿಯ ನೆನಪೊಳಗೆ
ದಿನಗಳು ಸಾಗಿವೆ.
ಕೈಜಾರಿರೊ ಮುತ್ತಿನ ಪ್ರೀತಿಯ ನೀ
ಕೈಹಿಡಿದು ಕಾಪಾಡೆಲೆ,
ಬ್ರಮೆಯಾಗಿರೊ ಈ ನನ್ನ ಪ್ರೀತಿಯ ನೀ
ಉಳಿಸು ಓ ನನ್ನ ಚೆಲುವೆ
ಉಳಿಸು ಓ ನನ್ನ ಚೆಲುವೆ.
ಕಣ್ಣೆದುರಲ್ಲೇ ಇದ್ದು
ನೀನು ಕಣ್ಣಿಗೆ ಕಾಣದಂತೆ,
ನನ್ನೇಕೆ ಹೀಗೆ ಸುಮ್ಮನೆ ಕಾಡಿರುವೆ.
ಮನಸೊಳಗೆ ಇದ್ದು
ನೀನು ಮನಸಿಗೆ ಬಾರದಂತೆ,
ನನ್ನೇಕೆ ಹೀಗೆ ಕಾಯಿಸಿ ಕೊಂದಿರುವೆ.
ಒಲವೇ ಒಲವೇ ನನ್ನೊಲವೆ ನೀ ಚೆಲುವೆ,
ಒಲವೇ ಒಲವೇ ನನ್ನುಸಿರಲಿ ನೀನಿರುವೆ.
*----- ಜಯಸುತ -----*
Tuesday, October 23, 2007
Subscribe to:
Comments (Atom)
