Wednesday, July 15, 2009

ಕಣ್ಣೋಟ

ಮೌನ ಮಾತಾಗಲು ಪದಗಳೇ ಸುಂದರ
ಹಾಳೆ ಹಾಡಾಗಲು ಬರಹವೇ ಸುಂದರ
ಇರುಳಲ್ಲಿ ಬೆಳಕಾಗಿ,
ನೀರಲ್ಲಿ ಅಲೆಯಾಗಿ,
ಮಳೆಯಲ್ಲಿ ಮಿಂಚಾಗಿ,
ನೆನಪಲ್ಲಿ ಕನಸಾಗಿ,
ಕಾಡುವ ಕಣ್ಣೋಟವೇ ಸುಂದರ,
ಕಾಡುವ ಕಣ್ಣೋಟವೇ ಸುಂದರ.
ಮೌನ ಮಾತಾಗಲು............ಬರಹವೇ ಸುಂದರ ||

ತಿಳಿಯದ ಮನಸಿಗೆ
ಬೆಚ್ಚಗಿನ ನೆನಪು,
ಮೋಡದ ಮರೆಯಲಿ
ಚಂದ್ರನ ಬಿಳುಪು,
ಹುಡುಕುತ ಸಾಗಿದೆ
ಕಣ್ಣಿಗೆ ಕಾಣದೆ,
ಮನಸಲಿ ಮೂಡಿದೆ
ಪ್ರೀತಿಯ ತಿಳಿಸದೆ,
ಈ ರೀತಿ ಕಾಡುವ ಕಣ್ಣೋಟವೇ ಸುಂದರ,
ಕಾಡುವ ಕಣ್ಣೋಟವೇ ಸುಂದರ.
ಮೌನ ಮಾತಾಗಲು............ಬರಹವೇ ಸುಂದರ ||

ಸವಿ ಮಾತಿನ ಸಿಹಿ ಮನಸಲಿ
ಒಂದಾದ ಭಾವನೆ,
ಹೊಂಗನಸಿನ ನರುಗಂಪಲಿ
ನವಿರಾದ ಕಲ್ಪನೆ,
ಏಥಕೆ ಬರುತಿದೆ
ಹೊಸದಾದ ಯೋಚನೆ,
ಬದುಕೀಗ ಕಂಡಿದೆ
ಪ್ರೀತಿಸುವ ಸೂಚನೆ.
ಈ ರೀತಿ ಕಾಡುವ ಕಣ್ಣೋಟವೇ ಸುಂದರ,
ಕಾಡುವ ಕಣ್ಣೋಟವೇ ಸುಂದರ.
ಮೌನ ಮಾತಾಗಲು............ಬರಹವೇ ಸುಂದರ ||

******************ಜಯಸುತ*************