Monday, February 18, 2008

ನೀ ನನ್ನ ನೋಡಿದಾಗ

ನೀ ನನ್ನ ನೋಡಿದಾಗ,
ಕಣ್ಣಲ್ಲಿ ಒಲವಿನ ಸಂಚಾರ.
ನೀ ಮಾತನಾಡಿದಾಗ,
ಮನದಲ್ಲಿ ಪ್ರೇಮದ ಜೇಂಕಾರ.
ಸುಧೆಯಾಗಿ ಹರಿದಿದೆ ಪ್ರೀತಿ ಎದೆಯಾಳದೆ,
ಕನಸೊಂದು ಕಣ್ಣ ತುಂಬಿ ಮಿಂಚಾಗಿದೆ.
ಬಾಯಿಬಿಟ್ಟು ಹೇಳಲಾರೆ ನಿನ್ನೆದುರಲಿ,
ಕಟ್ಟಿ ಹಾಕಿದೆ ಮನವು ಏನು ಮಾಡಲಿ.
ನೀ ನನ್ನ ನೋಡಿದಾಗ,
ಕಣ್ಣಲ್ಲಿ ಒಲವಿನ ಸಂಚಾರ........

ಹೃದಯ ತೊರೆದು ಹೋಗು ಎಂದು
ಹೇಳಲಾರೆ ಪ್ರೇಮಕೆ,
ಕಣ್ಣ ಮುಂದೆ ಇರುವ ನಿನ್ನ
ಕಳೆದುಕೊಳ್ಳದ ನಂಬಿಕೆ,
ಯಾರೋ ಏನೋ ಎಂದಾರೆಂದು
ಭಯವು ಪ್ರೀತಿಗೇತಕೆ,
ಸುಮ್ಮನೆ ಪ್ರೀತಿಸಬೇಕು
ಅನ್ನೋ ಆ ಬಯಕೆ.
ಕೇಳೆ ನೀನು ಓ ಒಲವೇ
ನನ್ನ ಮನಸ ಕದ್ದಿರುವೆ,
ಎಷ್ಟು ಬಾರಿ ಯೋಚಿಸುವೇಕೆ
ತಿಳಿಸು ನಿನ್ನಯ ಒಪ್ಪಿಗೆ.

ನೀ ನನ್ನ ನೋಡಿದಾಗ,
ಕಣ್ಣಲ್ಲಿ ಒಲವಿನ ಸಂಚಾರ........

ಪ್ರೇಮ ಕಥೆಗಳ ಪುಟಗಳಲಿ
ನಿನ್ನ ಹೆಸರಿನ ಪದಗಳೇ,
ಎಷ್ಟು ಸಲ ಓದಿದರೂನು
ಮರಳಿ ಓದುವ ಬಯಕೆಯೇ.
ಕವಿಯು ನಾನು ಕವಿತೆ ನೀನು
ಅನ್ನೋ ಒಂದು ಕಲ್ಪನೇ,
ನನ್ನ ನಿನ್ನ ಪ್ರೀತಿಯ ಪಯಣ
ನಿಜಕೂ ಬಲು ಚೆಂದಾನೇ.
ಇಷ್ಟು ಹೇಳಿಕೊಂಡರೂ
ಮುಗಿಯದು ಪ್ರೇಮದ ವಂದನೆ,
ನನ್ನ ಪ್ರೀತಿಸುವೆ ನೀ ಎಂಬ
ಮಾತದು ನನ್ನ ನಿವೇದನೆ.

ನೀ ನನ್ನ ನೋಡಿದಾಗ,
ಕಣ್ಣಲ್ಲಿ ಒಲವಿನ ಸಂಚಾರ........

*----- ಜಯಸುತ -----*

No comments: