Tuesday, July 29, 2008

ನಿವೇದನೆ

ವೇದನೆ ವೇದನೆ
ನನ್ನ ಮನಸಿನ ಪರಿಶೋಧನೆ
ಗೆಳತೀ ನಡೆಸಿದೆಯಾ, ನಿನಗೇ ಅರಿವಿದೆಯಾ
ವೇದನೆ ವೇದನೆ, ಈ ಮನಸಲಿ ಬರೀ ವೇದನೆ.

ಇಳೆಯು ಬಲು ಸುಂದರ ಕಾಣುವ ಮಂದಿರ
ಅಲ್ಲಿ ಶಾಂತಿಯ ಸಣ್ಣ ಹೊಂಗಿರಣ
ಪ್ರಶಾಂತದ ತಂಪು ಸಿಹಿ ಹೂರಣ
ಇದ್ದರೆ ನೀ ತಿಳಿಸುವೆಯಾ, ಗೆಳತಿ ನನಗೆ ಕೊಡಿಸುವೆಯಾ.

ವೇದನೆ ವೇದನೆ
ನನ್ನ ಮನಸಿನ ಪರಿಶೋಧನೆ........

ಬದುಕು ಸುಖ ಸಾಗರ, ಪಯಣಿಗ ದುಃಖದಾಗರ
ಅಲ್ಲಿ ನಗುವಿನ ಮುತ್ತು ನೀರಲಿ
ಸುತ್ತ ಸುಳಿಯುವ ಭಯದ ಕಾಡಲಿ
ದೊರೆತರೆ ನೀ ತಿಳಿಸುವೆಯಾ, ಗೆಳತಿ ನನಗೆ ಕೊಡಿಸುವೆಯಾ.
ವೇದನೆ ವೇದನೆ
ನನ್ನ ಮನಸಿನ ಪರಿಶೋಧನೆ
ಗೆಳತೀ ನಡೆಸಿದೆಯಾ, ನಿನಗೇ ಅರಿವಿದೆಯಾ
ವೇದನೆ ವೇದನೆ ಈ ಮನಸಲಿ ಬರೀ ವೇದನೆ.

************ಜಯಸುತ*************

ಪಿಸು ಮಾತಿನ ಪಲ್ಲವಿ

ಪಿಸುಗುಟ್ಟುವ ಮಾತಲಿ
ಕನವರಿಸುವ ಕನಸಲಿ
ಏನೇನೋ ವಿಷಯ ಅಡಗಿದೆ,
ಎದೆಯಾಳದ ಗೂಡಲಿ
ಕಣ್ಣಂಚಿನ ಮಿಂಚಲಿ
ಏನೇನೋ ವಿಷಯ ಅಡಗಿದೆ,
ಎರಡು ಮನಗಳ ಒಳಗೆ
ಏನೋ ನಡೆದಿದೆ,
ಎರಡು ಹೃದಯಗಳ ಒಳಗೆ
ಒಲವು ಮೂಡಿದೆ,
ಪ್ರೀತಿಯಲಿ ತೇಲಿದೆ
ಹೊಸಥರ ಅನಿಸಿದೆ.

ಪಿಸುಗುಟ್ಟುವ ಮಾತಲಿ
ಕನವರಿಸುವ ಕನಸಲಿ
ಏನೇನೋ ವಿಷಯ ಅಡಗಿದೆ.........


ಮನಸೊಳಗೆ ಬೆಚ್ಚನೆಯ
ನೂರಾರು ಮಾತುಗಳು,
ಕನಸೊಳಗೆ ತಣ್ಣನೆಯ
ನೂರಾರು ಕನಸುಗಳು,
ತೆರೆದಿಟ್ಟವು ಬಾನಿನಲ್ಲಿ
ಚಂದಿರನ ಊರಿನಲ್ಲಿ,
ಬೆಳದಿಂಗಳ ಇರುಳಿನಲ್ಲಿ
ಕೈಹಿಡಿದು ನಡೆದವಲ್ಲಿ.
ಪಿಸುಗುಟ್ಟುವ ಮಾತಲಿ
ಕನವರಿಸುವ ಕನಸಲಿ
ಏನೇನೋ ವಿಷಯ ಅಡಗಿದೆ.........

ಹೊಸದಾಗಿ ಬಾಳಿನಲ್ಲಿ
ಉಲ್ಲಾಸದ ಕ್ಷಣಗಳು,
ನೆನಪಲ್ಲೇ ಕಳೆವ ಆ
ಮಂಜಿನ ಹನಿಗಳು,
ಉಸಿರಿನಲ್ಲಿದ್ದರು
ಕೈಗೆಂದು ಬಾರವು,
ಬೆಸುಗೆ ಬಂಧವೂ
ಪ್ರೀತಿಯೇ ಚೆಂದವು.

ಪಿಸುಗುಟ್ಟುವ ಮಾತಲಿ
ಕನವರಿಸುವ ಕನಸಲಿ
ಏನೇನೋ ವಿಷಯ ಅಡಗಿದೆ.........

***********ಜಯಸುತ************