ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಕನಸಲ್ಲಿ ನೂರು ಆಸೆಗಳ ಬಚ್ಚಿಟ್ಟು
ಮನಸಲ್ಲಿ ನೂರು ನೋವುಗಳ ಮುಚ್ಚಿಟ್ಟು
ನಾ ಬಂದಿರುವೆ ನಿನಗೆ ಶುಭ ಕೋರಲು.
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಒಡಲಲ್ಲಿ ಕಣ್ಣೀರ ಮಳೆಯಾದರು
ಮುಖದಲ್ಲಿ ನಗುವೆಂಬ ಕಾರಂಜಿಯು
ನೆನಪಲ್ಲಿ ಆ ಪ್ರೀತಿ ಬಿರುಗಾಳಿಯು
ನಿಜದಲ್ಲಿ ಈ ಸ್ನೇಹ ಸಂಕೋಲೆಯು
ತ್ಯಾಗಕ್ಕೆ, ಎಂದೂ ಬಾಳಬೇಕು ನಾವು
ಪ್ರೇಮಕ್ಕೆ, ಕೊನೆಗೆ ಸಿಗೋದು ಬರೀ ನೋವು................
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
ಕಣ್ಣಲ್ಲಿ ಚಿಗುರೊಡೆದ ಪ್ರತಿಬಿಂಬವು
ಎದುರಲ್ಲಿ ಕವಲೊಡೆದ ಸಂಬಂಧವು
ಮಾತಲ್ಲಿ ಮರೆಯಾದ ಆ ಮೌನವು
ಈಗಿಲ್ಲಿ ಹಾಡಿಗೊಂದು ಒಳ ಅರ್ಥವು
ತ್ಯಾಗಕ್ಕೆ, ಎಂದೂ ಬಾಳಬೇಕು ನಾವು
ಪ್ರೇಮಕ್ಕೆ, ಕೊನೆಗೆ ಸಿಗೋದು ಬರೀ ನೋವು................
ಚೆನ್ನಾಗಿರು ನೀ ಚೆನ್ನಾಗಿರು
ನನ್ನ ಪ್ರೀತಿ ತೊರೆದರೂ ನೀ ಚೆನ್ನಾಗಿರು.
*----- ಜಯಸುತ -----*
Subscribe to:
Post Comments (Atom)

No comments:
Post a Comment