Wednesday, April 4, 2007

ಕಣ್ಣಂಚಿನ ಮಿಂಚು

ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ
ಆಗ ಮನದ ತುಂಬಾ
ಬೇರೇನಿಲ್ಲ ಅವಳದೇ ಬಿಂಬ, ಒಲವ ಸೆಳೆವ ಪ್ರೀತಿ ಎಂಬ
ಕರೆಯ ಮಾಡಿದೆ.
ಕಣ್ಣು ಮುಚ್ಚಿ ಕೂತರು, ನೆನಪಿನಲ್ಲಿ ಅವಳದೇ ನೆರಳು
ಕನಸಿನಲ್ಲಿ ಮಲಗಲು ಬಿಡಳು, ಅವಳೇ ಬರುವಳು.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.

ನಡೆವ ದಾರಿಯಲ್ಲಿ
ಜೊತೆಗೆ ಅವಳು ಬರುತಿಹಳೆಂದು
ನುಡಿವ ಮಾತಿನಲ್ಲಿ
ಸ್ವರಕೆ ಹುಸಿರು ಆಗಿಹಳೆಂದು, ಜೊತೆಗೆ ಅವಳು ನುಡಿದಿಹಳೆಂದು
ಏನೋ ಕಲ್ಪನೆ.
ಎಲ್ಲಿ ಹೋದರಲ್ಲಿ, ಅವಳೇ ನನ್ನ ಜೊತೆಯಾಗಿಹಳು
ಎಲ್ಲಿ ನೋಡಿದರಲ್ಲೇ ಇಹಳು, ಏನು ಮಾಯೆಯೋ.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.

ನಿಂತ ನೀರಿಗೊಂದು
ಕಲ್ಲು ಎಸೆದಂತಾಗಿದೆ ತನುವು
ತಂಪು ಗಾಳಿಯಲ್ಲಿ
ಹಾರ ಬೇಕೆಂದಿದೆ ಮನವೂ, ಯಾರ ಬಲೆಗೂ ನಿಲುಕದ ಒಲವು
ಕದಡಿ ಹೋಗಿದೆ.
ಬಾನ ತೆಕ್ಕೆಯಲ್ಲಿ, ಹಾರುವಂತ ಹಕ್ಕಿಯು ನಾನು
ಪ್ರಾಣವಾಯುವಾದರವಳು, ಇದುವೇ ಮೋಹವೋ.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.

ಅವಳ ಕಂಡಿನಿಂದ
ಕವಿಯ ಹಾಗೆ ಹಾಗಿದೆ ಮನವೂ
ಅವಳ ಕಣ್ಣಿನಿಂದ
ಬಂದ ಪ್ರೇಮಸುಧೆಯ ಚೆಲುವು, ಕಾವ್ಯವನ್ನು ಬರೆಯುವ ವರವು
ನನ್ನದಾಗಿದೆ.
ನನ್ನ ಮನದ ಕೂಗು, ಕಾವ್ಯವಾಗಿ ಅವಳ ಮನವ
ತಲುಪಿದಲ್ಲಿ ಸಾರ್ಥಕ ಒಲವು, ಇದುವೇ ಕವಿತೆಯೋ.
ಅವಳ ಕಣ್ಣ ನೋಟ
ತಿಳಿಸದೇ ಮನದಲಿ ಆಡಿದೆ ಆಟ.


*----- ಜಯಸುತ -----*

No comments: